ಇದು ನಮ್ಮನೆ

ಇದು ನಮ್ಮನೆ

Tuesday 13 September 2016

ಕಾವೇರಿ ವಿವಾದ : ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ !!!


 ಸೆಪ್ಟೆಂಬರ್ 12 ಸೋಮವಾರ, ಕರ್ನಾಟಕದ ಪಾಲಿಗೆ ಒಂದು ಮರೆಯಲಾಗದ ಹಾಗು ಅರಗಿಸಕೊಳ್ಳಲಾಗದ ಕರಾಳ ದಿನ. ಮಂಡ್ಯ ಮೈಸೂರಿನಲ್ಲಿ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ಮುಟ್ಟುವಷ್ಟರಲ್ಲಿ ಬೆಂಗಳೂರಿನಲ್ಲಿ ಕಿಡಿ ಹೊತ್ತಿ ಉರಿಯಲು ಆರಂಭಿಸಿತು. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೆಲವು ಕಿಡಿಗೇಡಿಗಳು ಹಚ್ಚಿದ್ದ ಕಿಡಿ ಇಡಿ ಬೆಂಗಳೂರಿಗೆ ವ್ಯಾಪಿಸಿತು . ಕೆಲವು ಗಂಟೆಗಳಲ್ಲೇ ಬೆಂಗಳೂರನ್ನು ಬೆಂಕಿಯ ಕೆನ್ನಾಲಿಗೆ ಆವರಿಸಿಹೊಗಿತ್ತು. ಅಘೋಷಿತ ಬಂದ್ ,ಶಾಲಾ ಕಾಲೇಜಿಗೆ ರಜೆ , ಅಂಗಡಿ ಕಚೇರಿಗಳಿಗೆಲ್ಲ ಬೀಗ, ಸಂಚಾರಕ್ಕೆ ಅಡಚಣೆ ಇವೆಲ್ಲವೂ ಬೆಂಗಳೂರನ್ನು ಸ್ತಬ್ಧಗೊಲಳಿಸಿತು. ಅಷ್ಟಕ್ಕೂ ಇವೆಲ್ಲ ಆಗಿದ್ದಕ್ಕೆ ಕಾರಣ ಏನು ?? ಸುಪ್ರೀಂ ಕೋರ್ಟ್ ನ ತೀರ್ಪು ಎಂದಾದರೆ ಕಳೆದ ವಾರವೂ ಕೂಡ ಒಂದು ತೀರ್ಪು ಹೊರಬಿದ್ದಿತ್ತು, ಆಗ ಇಂತಹ ಯಾವುದೇ ಘಟನೆಗಳು ಇರಲಿಲ್ಲ. ಇವೆಲ್ಲವನ್ನೂ ವಿಮರ್ಶಿಸಿ ನೋಡಿದಾಗ, ಮೇಲ್ನೋಟಕ್ಕೆ ಕಾವೇರಿ ವಿವಾದ ಕಾರಣವಾಗಿದ್ದರೂ , ಈ ಕಿಚ್ಚು ಹತ್ತಿದ್ದು ಒಬ್ಬ ಕಾಲೇಜ್ ಯುವಕನ ಮತಿಹೀನ ಪೋಸ್ಟ್ಗಳಿಂದ . ಅಂದಿನಿಂದ ಏನಾಯಿತು ??

ಸೆಪ್ಟೆಂಬರ್ 9 , ಕಾವೇರಿ ಹೋರಾಟದಿಂದ ಕರ್ನಾಟಕ ಬಂದ್ ಇದ್ದ ದಿನ . ಕರ್ನಾಟಕದಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತ ಪ್ರತಿಭಟನೆಗಳು ನಡೆದಿದ್ದವು. ಅಂದಿನ ದಿನ ಎಲ್ಲ ಶಾಂತವಾಗಿ ಮುಗಿದುಹೊಗಿತ್ತು. ಶನಿವಾರ ಸಂಜೆಯ ಹೊತ್ತಿಗೆ ಸುದ್ದಿ ಮಾದ್ಯಮದಲ್ಲಿ ಒಂದು ಸುದ್ದಿ ಹಬ್ಬಿತ್ತು. ಒಬ್ಬ ತಮಿಳುನಾಡು ಮೂಲದ ಪಿಇಎಸ್ ಕಾಲೇಜಿನ ಯುವಕ ಕನ್ನಡದ ನಟರ ವಿರುದ್ಧ ಫೇಸ್ಬುಕ್ ನಲ್ಲಿ ಅಶ್ಲೀಲ ಅಸಹ್ಯ ಪೋಸ್ಟ್ ಹಾಕುತ್ತಿದ್ದಾನೆಂದು ಗಿರಿನಗರದಲ್ಲಿ ಅವನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದ ವೀಡಿಯೊ ಎಲ್ಲೆಡೆ ಹರಿದಾಡತೊಡಗಿತ್ತು. ಇದನ್ನು ಕನ್ನಡ ಸುದ್ದಿ ವಾಹಿನಿಗಳು ವೀರತ್ವದ ಪ್ರದರ್ಶನದ ಹಾಗೆ , ಕನ್ನಡಿಗರ ಹೆಮ್ಮೆಯ ಸುದ್ದಿಎಂಬ ಹಾಗೆ ಬಿತ್ತರಿಸತೊಡಗಿದವು. ಆದರೆ ಅಲ್ಲಿ ಆಗಿದ್ದು ಯುವಕನ ಮೇಲೆ ಹಲ್ಲೆ , ಅವನು ತಪ್ಪು ಮಾಡಿದಮೇಲೆ ಪೊಲೀಸರಿಗೆ ತಿಳಿಸಬಹುದಿತ್ತು. ಆದರೆ ಅವನ ಮೇಲೆ ನೈತಿಕ ಹಲ್ಲೆಗೆ ಇಳಿದಿದ್ದು ಕಾನೂನಿನ ಪ್ರಕಾರ ತಪ್ಪು ಎಂದು ಮಾದ್ಯಮಗಳು ತೋರಿಸಲೇ ಇಲ್ಲ. ಆದರೂ ಒಂದನ್ನು ಗಮನಿಸಬೇಕಾದ ಸಂಗತಿಯೆಂದರೆ , ತಮಿಳುನಾಡಿನಲ್ಲಿ ಅವರ ಪ್ರಸಿದ್ದ ನಟರ ವಿರುದ್ಧ ಅವಹೇಳನ ಮಾಡಿದ್ದರೆ ಅವರು ಸುಮ್ನೆ ಬಿಡುತ್ತಿದ್ದರೆ ? 

ಕೋಪಕ್ಕೆ ಒಂದು ಗುಂಪು ತಲೆ ಬಾಗಿ ಹಲ್ಲೆ ನಡೆಸಿದ್ದನ್ನು ತಮಿಳು ಸುದ್ದಿ ಮಾಧ್ಯಮದಲ್ಲಿ ಎಲ್ಲ ತಮಿಳಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಿದರು. ಇದರಿಂದ ರೊಚ್ಚಿಗೆದ್ದ ಅಲ್ಲಿನ ನಾಯಕರು ಸೇಡಿನ ಮಾತನ್ನು ಹೇಳಲು ಆರಂಭಿಸಿದರು. ಇದರಿಂದ ರೊಚ್ಚಿಗೆದ್ದ ತಮಿಳುನಾಡಿನ ಕಿಡಿಗೇಡಿಗಳು ಬಾನುವಾರ ನಡೆದಿದ್ದ ಕನ್ನಡ ಸಾಹಿತ್ಯ ಸಭೆಗೆ ನುಗ್ಗಿ ಗಲಭೆ ಎಬ್ಬಿಸಿದ್ದರು . ಸೋಮವಾರ ಮುಂಜಾನೆಯೇ ರಾಮೇಶ್ವರದಲ್ಲಿ ಕರ್ನಾಟಕ ನೊಂದಣಿಯ ವಾಹನಗಳನ್ನು ಧ್ವಂಸ ಮಾಡಿದರು. ಕೆಲವು ಕನ್ನಡಿಗರ ಮೇಲೆ ಹಲ್ಲೆ ನಡೆಸಿದರು . ಚೆನ್ನೈ ನ ಪ್ರತಿಷ್ಟಿತ ಹೋಟೆಲ್ ವುಡ್ಲ್ಯಾಂಡ್ಸ್ ಮೇಲೆ ಪೆಟ್ರೋಲ್ ಬಾಂಬ್ ಎಸೆದರು . ಹೋಟೆಲ್ ಒಳಗೆ ನುಗ್ಗಿ ಆಸ್ತಿ ಹಾನಿ ಮಾಡಿದರು . ಪುದುಚೇರಿಯ ಕರ್ನಾಟಕ ಬ್ಯಾಂಕ್ ಒಳಗೆ ನುಗ್ಗಿ ಗಲಭೆ ಎಬ್ಬಿಸಿದರು. ಇದು ಕನ್ನಡ ಸುದ್ದಿ ವಾಹಿನಿಯಲ್ಲಿ ಬಿತ್ತರಿಸಿದರು. ಎಲ್ಲ ವಾಹಿನಿಯವರು ಎಲ್ಲ ಕನ್ನಡ ಸಂಘಟನೆಗಳಿಗೆ  ಕರೆ ಮಾಡಿ “ಅಲ್ಲಿ ಹೀಗಾಗುತ್ತಿದೇ , ನಿಮ್ಮ ಮುಂದಿನ ನಡೆ ಏನು ? ನೋಡಿ ಅಲ್ಲಿ ಕನ್ನಡಿಗರ ಸ್ತಿತಿ ಹೇಗಿದೆ . ಇಲ್ಲಿ ತಮಿಳಿಗರು ಕ್ಷೆಮವಾಗಿದ್ದರು ಹೇಗೆ ಥಲಿಸುತ್ತಿದ್ದರೆ ನೋಡಿ” ಎಂದು  ಎಲ್ಲೆಡೆ ಬಿತ್ತರಿಸಿದರು .

 ಈ ಕಿಚ್ಚು ಮಂಡ್ಯ ಮೈಸೂರು ಬೆಂಗಳೂರಿನಲ್ಲಿ ಚಿಕ್ಕದಾಗಿ ಹತ್ತಿತ್ತು. ಆಗ ಸುಪ್ರೀಂ ಕೋರ್ಟ್ ನ ಒಂದು ಅವಿವೇಕದ ತೀರ್ಪು ಹೊರಬಿತ್ತು. ಕರ್ನಾಟಕದ ವಿರುದ್ದ ಈ ತೀರ್ಪು ಬಂದಿದ್ದರಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು . ನೋಡನೋಡುತಿದ್ದಂತೆಯೇ ತಮಿಳು ನೊಂದಣಿಯ ಗಾಡಿಯನ್ನು ಮೈಸೂರು ರಸ್ತೆಯಲ್ಲಿ ಸುಟ್ಟರು . ಮೈಸೂರು ರಸ್ತೆಯ ಅದ್ಯಾರ್ ಆನಂದ್ ಭವನ್ ಮೇಲೆ ಕಲ್ಲು ತೂರಾಟ ನಡೆಸಿದರು . ಸಮಯ ಸಾಗುತ್ತಲೇ ಈ ಬೆಂಕಿ ಈಡೀ ಬೆಂಗಳೂರನ್ನು ಆವರಿಸಿತು. ಕಂಡ ತಮಿಳು ವಾಹನಗಳನ್ನು ಬೆಂಕಿಗೆ ಆಹುತಿ ಕೊಟ್ಟರು. ತಮಿಳು ಮೂಲದ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಿದರು. ಪೋಲೀಸರನ್ನು ಎಲ್ಲೆಡೆ ನಿಯೋಜಿಸಿದ್ದಾದರು ಯಾವುದು ನಿಯತ್ರಣಕ್ಕೆ ಬರಲಿಲ್ಲ. ರಸ್ತೆಯ ಮೇಲೆ ಸಾರ್ವಜನಿಕ ಓಡಾಟಕ್ಕೆ ಬ್ರೇಕ್ ಬಿದ್ದಿತ್ತು. ಸಂಜೆಯ ಹೊತ್ತಿಗೆ ನಾಯಂಡಹಳ್ಳಿಯಾ ಕೆ.ಪಿ.ಏನ್ ಟ್ರಾವೆಲ್ಸ್ ನ ಸುಮಾರು 50 ಬಸ್ ಅನ್ನು ಸುಟ್ಟರು. ಅಲ್ಲಿಗೆ ಬೆಂಗಳೂರು ರಣರಂಗವಾಗಿತ್ತು. ಎಲ್ಲೆಡೆ ಲಾಟಿ ಪ್ರಹಾರ, ಕೆಲವೆಡೆ ಗೋಲಿ ಬಾರ್ ಶುರುವಾಗಿತ್ತು . ರಾತ್ರಿಯ ಹೊತ್ತಿಗೆ 16 ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕುರ್ಫ್ಯು ಜಾರಿಯಾಯಿತು. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಯಾವ ಸಾಮಾನ್ಯ ಕನ್ನಡಿಗನು ಅಲ್ಲ . ಎಲ್ಲ ಬಡಾವಣೆಯಲ್ಲೂ ಗೂಂಡಾಗಳು ಬೀದಿಗೆ ಇಳಿದಿದ್ದರು. ಎಲ್ಲರನ್ನು ಪ್ರಚೋದಿಸಿ ಗಲಭೆ ಶುರುಮಾಡಿದ್ದರು. ಪೋಲೀಸರ ಕೆಲವು ದಿಟ್ಟ ನಿರ್ಧಾರದ ಮೇಲೆ ಇಂದು ಎಲ್ಲವು ಶಾಂತವಾಗಿದೆ . ಬೆಂಗಳೂರು ಮತ್ತೆ ಸಹಜ ಸ್ಥಿತಿಗೆ ಮರುಕಳಿಸಿದೆ.
ಇಲ್ಲಿ ರಾಜಕೀಯಕ್ಕೆ ಬಡವರ ವಾಹನಗಳು ಬೆಂದು ಹೋದವು , ಸಾಮಾನ್ಯ ಜನರ ಜೀವನಕ್ಕೆ ಅಡ್ಡಿ ಉಂಟಾಗಿತ್ತು. ಗೂಂಡ ಮತ್ತು ಭೂಗತ ಜಗತ್ತಿನ ಕಿಡಿಗೇಡಿಗಳು ಉಧ್ಯಾನ ನಗರಿಯನ್ನು ಬೆಂಕಿ ಚೆನ್ದಂತೆ ಮಾಡಿದ್ದರು. ಇಷ್ಟೆಲ್ಲಾ ಮುಗಿದಮೇಲೂ ಕೆಲವು ಉತ್ತರವಿಲ್ಲದ ಅನುಮಾನದ ಪ್ರಶ್ನೆಗಳು ಮೂಡುತ್ತವೆ.

ಕ್ಯಾಮೆರಾ ಕಣ್ಣಲ್ಲಿ ಕಂಡಂತೆಯೇ ಲಾರಿ,ಬಸ್ ಗಳನ್ನೂ ಬೆಂಕಿಗೆ ಒಂದೆರಡು ನಿಮಿಷದಲ್ಲಿ ಹಚ್ಚುತ್ತಿದ್ದರು. ಇಷ್ಟೊಂದು ಬೆಂಕಿ ಹಚ್ಚುವ ಕೌಶಲ್ಯ ಸಾಮಾನ್ಯ ಜನರಿಗಿರುತ್ತ ?? ಸಾಮಾನ್ಯ ಹೋರಾಟಗಾರರಿಗೆ ಇರುತ್ತಾ ?? ರೈತರಿಗೆ ಇದು ಸಾಧ್ಯವೆ  ?? (ಅಲ್ಲಿಗೆ ಗಲಭೆ ಎಬ್ಬಿಸಿದ್ದವರಲ್ಲಿ ಗೂಂಡ ಮತ್ತು ಭೂಗತ ಜಗತ್ತಿನ ಕೈವಾಡ ವಿದೆ ಎಂಬಂತೆ ಪುಷ್ಟಿ ಕೊಡುತ್ತದೆ )
ಅಷ್ಟು ಉರಿದಿದ್ದರು ಒಂದೇ ಒಂದು ತಮಿಳುನಾಡಿನ ಸರಕಾರೀ ಬಸ್ಸಿಗೆ ಹಾನಿಯಾಗಿಲ್ಲ. ಏಕೆಂದರೆ ಅವು ಇಲ್ಲಿಂದ ಹಿಂದಿನ ದಿನದ ರಾತ್ರಿಯೇ ಕಾಲ್ಕಿತ್ತಿತ್ತು. ಹಾಗಿದ್ದರೆ ತಮಿಳುನಾಡಿನ ಸರಕಾರಕ್ಕೆ ಹೀಗಾಗುತ್ತೆ ಎಂದು ಮೊದಲೇ ಗೊತ್ತಿತ್ತೆ? ಗೊತ್ತಿದ್ದರು ಮೌನ ವಹಿಸಿತ್ತೆ ? ಇದರಲ್ಲಿ ಅವರ ಕೈವಾಡವು ಇದೆಯಾ ??
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಪ್ರತಿ ಭಾರಿ ದೊಡ್ಡ ಗಲಭೆಗಳಲ್ಲಿ ಕೆ.ಪಿ.ಏನ್ ಟ್ರಾವೆಲ್ಸ್ ನ ಬಸ್ಸುಗಳು ಒಟ್ಟಿಗೆ ಬೆಂಕಿಗೆ ಆಹುತಿಯಾಗುತ್ತವೆ . ಇದು ಮಾಲೀಕನ ಹುನ್ನಾರ ಆಗಿದೆಯಾ ? ಇನ್ಸೂರೆನ್ಸ್ ಹಣಕ್ಕೆ ಇಂತಹದನ್ನು ಸೃಷ್ಟಿ ಮಾಡುತ್ತಿದ್ದಾರೆಯೇ ?

ಇವೆಲ್ಲವೂ ವಿಚಾರಣೆ ಬಳಿಕವಷ್ಟೇ ಗೊತ್ತಾಗಬೇಕಿದೆ. ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ ನಿಜ. ಅದಕ್ಕೆ ಶಾಂತಿಯನ್ನು ನಾವುಗಳು ಮೀರಬಾರದು. ಈ ಗಲಭೆಯಲ್ಲಿ ಹಾನಿಯಾಗಿದ್ದೆಲ್ಲ ಸಾರ್ವಜನಿಕ ಆಸ್ತಿ, ಬಡವರ ಕಷ್ಟ ಪಟ್ಟು ದುಡಿದ ವಾಹನಗಳು. ಎಲ್ಲರು ಶಾಂತಿ ಕಾಪಡುವುದು ನಮ್ಮ ಕರ್ತವ್ಯ . ಕಾನೂನಿನ ರೀತಿಯಲ್ಲಿ ಏನು ಆಗಬೇಕೋ ಅವೆಲ್ಲವೂ ಸರಕಾರ ತೊಗೊಳಲಿ ಎಂದು ಅಗ್ರಹಿಸೋಣ. ಶಾಂತಿಇಂದ ನೆಲೆಸೋಣ .



     .

Friday 4 March 2016

ಸ್ವಚ್ಚ ಭಾರತ - ಇದು ಪ್ರತಿಯೊಬ್ಬ ಭಾರತೀಯನ ಅಭಿಯಾನ.

ಸ್ವಚ್ಚ ಭಾರತ ಅಭಿಯಾನ ಭಾರತದಲ್ಲಿ ಅತಿ ಸುದ್ದಿ ಮಾಡುತ್ತಿರುವ ಅಭಿಯಾನ. ಅಕ್ಟೋಬರ್ ೨ ,೨೦೧೪, ಗಾಂಧಿ ಜಯಂತಿಯಂದು ನಮ್ಮ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿರವರು ಚಾಲನೆ ಕೊಟ್ಟ ಅಬಿಯಾನ . ಮಹಾತ್ಮ ಗಾಂಧಿಯವರ ಆಶಯದಂತೆ ಇಡೀ ಭಾರತ ಪ್ರತಿಯೊಂದು ಬೀದಿಯು ಸಹ ಸ್ವಚ್ಚವಾಗಿಡುವುದು ಮುಖ್ಯ ಗುರಿ. 
ನಮ್ಮ ಮನೆ ಅಂಗಳ , ರಸ್ತೆಗಳು,ದೇವಸ್ಥಾನ,ಶಾಲೆ,ಆಸ್ಪತ್ರೆ, ಬಸ್ ಮತ್ತು ರೈಲ್ವೆ ನಿಲ್ದಾಣಗಳನ್ನು ಮತ್ತು ಹಲವಾರು ಸಾಮಾಜಿಕ ಪ್ರದೇಶಗಳನ್ನು ಕಸಮುಕ್ತವಾಗಿಸಬೇಕು ಎಂಬುದು ಇದರ ಧ್ಯೇಯ . 
ಇತ್ತೀಚಿನ ದಿನಗಳಲ್ಲಿ ಈ ಅಭಿಯಾನ ತೋರಿಕೆಗಷ್ಟೇ ಸೀಮಿತವಾಗಿದೆ. ಬಹಳಷ್ಟು ಜನರು ಈ ಅಭಿಯಾನ ಸರಕಾರದಿಂದ ರೂಪಿತವಾಗಿದೆ, ಸರಕಾರವೇ ನಿರ್ವಹಿಸುತ್ತದೆ, ಸರಕಾರವೇ ಸಂಪೂರ್ಣಗೊಳಿಸಿ ತಮಗೆಲ್ಲ ಸ್ವಚ್ಚ ಭಾರತವನ್ನು ಕೊಡುತ್ತಾರೆ ಇಲ್ಲವಾದಲ್ಲಿ ಅಭಿಯಾನವು ಯಶಸ್ವಿಯಾಗುವುದಿಲ್ಲವೆಂದು ತಪ್ಪಾಗಿ ಭಾವಿಸಿದ್ದಾರೆ.
ಸ್ವಚ್ಚತೆ ಇದ್ದಲ್ಲಿ ಆರೋಗ್ಯ, ಆರೋಗ್ಯ ಇದ್ದಲ್ಲಿ ಸುಖ, ಐಶ್ವರ್ಯ ,ನೆಮ್ಮದಿ ಎಲ್ಲವು ಸಿಗುತ್ತದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾವು ಹೇಗೆ ಇದರಲ್ಲಿ ಪಾಲ್ಗೊಳ್ಳುವುದು ಎಂದು ನಾವೆಲ್ಲರೂ ಯೋಚಿಸಬೇಕು .  ಇದರಲ್ಲಿ ಭಾಗವಹಿಸುವುದೆಂದರೆ ಪ್ರತಿಯೊಂದು ರಸ್ತೆಯಲ್ಲಿ ಪೊರಕೆಯನ್ನು ಹಿಡಿದು ಗುಡಿಸಿ ಸ್ವಚ್ಚಗೊಳಿಸುವುದು ಎಂಬುದಲ್ಲ ಅರ್ಥ. ಈಗ ಬಹಳಷ್ಟು ಜನ ಯಾವುದೋ ಒಂದು ದಿನ, ಯಾವುದೋ ಒಂದು ರಸ್ತೆಯಲ್ಲಿ ಗುಂಪು ಗುಂಪಾಗಿ ಪೋರಕೆಯನ್ನು ಹಿಡಿದು ಅಲ್ಲಲ್ಲಿ ಗುಡಿಸಿ ಛಾಯಚಿತ್ರ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸ್ವಚ್ಚ ಭಾರತಕ್ಕೆ ತಮ್ಮದು ಒಂದು ಕೊಡುಗೆ ಎಂದು ಬಿಂಬಿಸುತ್ತಾರೆ. ಸ್ವಚ್ಚ ಭಾರತ ಎಂದರೆ ಇಷ್ಟೇ ಎಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. 
ಮೊದಲು ರಸ್ತೆಯಲ್ಲಿ ಕಸ ಹೇಗೆ ತುಂಬುತ್ತದೇ ಎಂದು ಯೋಚಿಸಿದರೆ ನಾವು ನಮಗೆ ತಿಳಿಯದೆ ಖಾಗದ,ಬಿತ್ತಿ ಪತ್ರಗಳು , ತಿಂದು ಎಸೆದ ತಿಂಡಿ ಪದಾರ್ಥಗಳು , ಪ್ಲಾಸ್ಟಿಕ್ ಕವರ್ ಹೀಗೆ ಹಲವಾರು ಕಸಗಳು ಸಿಗುತ್ತದೆ . ಮೊದಲು ಇದನ್ನು ನಾವು ನಿಲ್ಲಿಸಬೇಕು . ಕೇಳುವುದಕ್ಕೆ ಬಹಳ ಚಿಕ್ಕ ಕೆಲಸವೇ ಆಗಿದ್ದರು ಇದರಿಂದ ಬದಲಾವಣೆ ಅಪಾರ. ನಾನು ಕೂಡ ಇದನ್ನು ಪ್ರಾರಂಭಿಸಿದ್ದೇನೆ , ಇಷ್ಟು ದಿನ ಎಲ್ಲೆಂದರಲ್ಲಿ ಬಿಸಾಡುತಿದ್ದ ನನಗೆ ಅರಭದಲ್ಲಿ ಕೊಂಚ ಕಷ್ಟವೆನೆಸಿದರು ಈಗ ಸರಾಗವಾಗಿ ಅದನ್ನು ಅನುಸರಿಸುತ್ತೇನೆ. ಇದನ್ನು ನನ್ನ ಸ್ನೇಹಿತರಿಗೂ ತಿಳಿಸಿದಾಗ ಕೆಲವರು ಪಾಲಿಸಿದರು, ಇನ್ನು ಕೆಲವರು ಅತಿಶಯೋಕ್ತಿಯ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಅದರಲ್ಲಿ ಕೆಲುವು ನೋವಿನ ಪ್ರಶ್ನೆಗಳು ಇಲ್ಲಿವೆ. 
  • ನೀನೊಬ್ಬ ಎಲ್ಲ ಕಸವನ್ನು ಕಸದ ಬುಟ್ಟಿಯಲ್ಲಿ ಎಸೆದರೆ ದೇಶ ಸ್ವಚ್ಛವಾಗುತ್ತಾ?
  •  ನೋಡು ಅಲ್ಲಿ ಇಲ್ಲಿ ಎಲ್ಲ ಯಾರೋ ಕಸ ಹಾಕಿದ್ದಾರೆ ಅದನ್ನು ಗುಡಿಸುತ್ತಿಯ?
  •  ರಸ್ತೆಯಲ್ಲಿ ಪ್ರಾಣಿಗಳು ಗಲೀಜು ಮಾಡುತ್ತವೆ ಅವುಗಳಿಗೂ ಹೀಗೆ ಹೇಳುತ್ತಿಯ?

ಹೀಗೆ ಹತ್ತು ಹಲವಾರು ಪ್ರಶ್ನೆಗಳು. ಇಂಥಹ ಪ್ರಶ್ನೆಗಳಿಗೆ ಉತ್ತರ. 
  • ಹೌದು , ಇಡೀ ದೇಶವೇ ಸ್ವಚ್ಚವಗುತ್ತೆ. ಪ್ರತಿಯೊಬ್ಬ ಪ್ರಜೆಯು ಈ ಕೆಲಸವನ್ನು ಕರ್ತವ್ಯವಾಗಿ ಪಾಲಿಸಿದರೆ ದೇಶ ಕಸಮುಕ್ತವಾಗುವುದರಲ್ಲಿ ಎರಡು ಮಾತಿಲ್ಲ 
  • ಅಲ್ಲಿ ಇಲ್ಲಿ ಯಾರೋ ಕಸ ಹಾಕಿದ್ದನ್ನು ಕಂಡರೆ ಅವರಿಗೂ ತಿಳಿ ಹೇಳಿ ಅವರಿಗೂ ಪಾಲಿಸುವಂತೆ ಕೊರಿಕೊಳ್ಳಿ. 
  • ಸಾಕು ಪ್ರಾಣಿಗಳು ರಸ್ತೆಯ ಶುಚಿತ್ವವನ್ನು ಹಾಳು ಮಾಡುವುದನ್ನು ಅದರ ಮಾಲೀಕರು ನೋಡಿಕೊಳ್ಳಬೇಕು.ಕೆಲವು ಪ್ರಾಕೃತಿಕ ಕಸವು ಇರುತ್ತದೆ ಮರದ ತುಂಡು ,ಎಲೆಗಳು , ಹಿಕ್ಕೆ ಹೀಗೆ ಹಲವಾರು ತಡೆಯಲಾಗದಂತಹ ಕಸವನ್ನು ಗುಡಿಸಲು ಪೌರ ಕಾರ್ಮಿಕರಿದ್ದಾರೆ. 
ಈ ರೀತಿ ಪ್ರತಿಯೊಬ್ಬನೂ ಚಿಕ್ಕ ಚಿಕ್ಕ ಕೆಲಸವನ್ನು ಪಾಲಿಸಿದರೆ ದೊಡ್ಡ ಬದಲಾವಣೆ ಸಂಭವಿಸುತ್ತದೆ. 
ಇದರ ಜೊತೆಗೆ ಈಗಾಗಲೇ ಸರಕಾರ ಕಸ ವಿಂಗಡಣೆಯನ್ನು ಪ್ರಾರಂಭಿಸಿದೆ. ಇದರ ಅನುಗುಣವಾಗಿ ನಿಮ್ಮ ಮನೆಯ ಕಸವನ್ನು ಹಸಿ ಕಸ, ಒಣ ಕಸ ಎಂದು ವಿಂಗಡಿಸಿ ಪ್ರತಿದಿನ ಮುಂಜಾನೆ ಮನೆಯ ಮುಂದೆ ಬರುವ ಕಸದ ವಾಹನಕ್ಕೆ ಸಲ್ಲಿಸುವುದರಿಂದ ಕಸ ಸಂಷ್ಕರಣೆಗೂ ಕೂಡ ಸಹಾಯ ಆಗುತ್ತದೆ. 

ಬೇರೆಯವರು ಪ್ರಾರಂಭ ಮಾಡಲೆಂದು ಕಾಯದೆ ನಿಮ್ಮ ಕರ್ತವ್ಯವನ್ನು ಮೊದಲು ನಿರ್ವಹಿಸಿದರೆ, ದೇಶಕ್ಕೆ ಒಂದು ದೊಡ್ಡ ಕೊಡುಗೆಯಾಗುತ್ತದೆ. ಇದರಿಂದ ನಮ್ಮ ದೇಶವು ಕೂಡ ಸ್ವಚ್ಚವಾಗುತ್ತದೆ, ಗಾಂಧೀಜಿಯವರ ಕನಸು ನನಸಾಗುತ್ತದೆ , ಸ್ವಚ್ಚತೆಯಿಂದ ಅರೋಗ್ಯ ಹೆಚ್ಚುತದೆ , ಆರೋಗ್ಯದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ , ದೇಶವು ಕೂಡ ಅಭಿವೃದ್ದಿಯ ಕಡೆಗೆ ಮುನ್ನುಗುತ್ತದೆ





ನಮ್ಮ ಭಾಷೆ : ಕನ್ನಡ

೧. ಕರ್ನಾಟಕದ ಅಧಿಕೃತ ಭಾಷೆ ಕನ್ನಡ.
೨. ಕನ್ನಡದ ಅಕ್ಷರಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳು .
೩. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ.
೪.ಕನ್ನಡಕ್ಕೆ ಸುಮಾರು ೨೦೦೦ ವರ್ಷದ ಇತಿಹಾಸವಿದೆ .
೫. ಇಡಿ ಪ್ರಪಂಚದಲ್ಲಿ ಸಂಸ್ಕೃತ, ತಮಿಳು , ಗ್ರೀಕ್ ಆದಮೇಲೆ ಕನ್ನಡ  ನಾಲ್ಕನೆ ಹಳೆಯ ಭಾಷೆ ಮತ್ತು ಭಾರತದಲ್ಲಿ ಮೂರನೇ ಹಳೆಯ ಭಾಷೆ.
೬. ಭಾರತದ  ರಿಸರ್ವ್ ಬ್ಯಾಂಕ್  ಮುದ್ರಿಸುವ ನೋಟಿನಲ್ಲಿ ಕನ್ನಡಕ್ಕೆ ನಾಲ್ಕನೆ ಸ್ಥಾನ.
೭.ನೃಪತುಂಗ ಕನ್ನಡದಲ್ಲಿ ಕವಿರಾಜಮಾರ್ಗ ಪ್ರಕಟಿಸಿದಾಗ ನಮ್ಮನ್ನು ಆಳಿದ ಆಂಗ್ಲರ ಆಂಗ್ಲ ಭಾಷೆ ತೊಟ್ಟಿಲ ಕೂಸಾಗಿತ್ತು ಗು ಹಿಂದಿ ಭಾಷೆಯ ಹುಟ್ಟು ಸಹ ಆಗಿರಲಿಲ್ಲ.
೮. ಭಾರತದ ರಾಷ್ಟೀಯ ಶಿಕ್ಷಕನೆಂದೇ ಕರೆಯಲ್ಪಟ್ಟ ಶ್ರೀ ವಿನೋಭಾ ಭಾವೆ ಅವರು ಕನ್ನಡ ಭಾಷೆಯನ್ನು "ವಿಶ್ವ ಲಿಪಿಗಳ ರಾಣಿ"ಎಂದು ಕರೆದಿದ್ದಾರೆ .
೯.ಕನ್ನಡದ ರಾಷ್ಟ್ರ ಕವಿಯಾದ ಕುವೆಂಪುರವರು ಇಡಿ ಭಾರತದಲ್ಲಿ ಅತ್ಯಂತ ಹೆಚ್ಚು ಸಾಹಿತ್ಯ ಪ್ರಶಸ್ತಿ ವಿಜೇತ ಎಂದು ಹೇಳುವುದು ನಮ್ಮ ಹೆಮ್ಮೆ .
೧೦. ಕಿಟ್ಟೆಲ್ ಎಂಬ ವಿದೀಶಿಯು ಅಂಗ್ಲ-ಕನ್ನಡ ನಿಘಂಟು ಬರೆದಿರುವ ಏಕೈಕ ಬಾಷೆ .
೧೧.ವಿಕಿಪೀಡಿಯ ಚಿನ್ಹೆಯಲ್ಲಿ ಪ್ರಕಟವಾಗಿರುವ ಹಲವಾರು ಭಾಷೆಗಳಲ್ಲಿ ಕನ್ನಡವೂ ಒಂದು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು 

ಅಕ್ಷರಮಾಲೆ